ಚಿತ್ರ: ಶುಭಮಂಗಳ
ಸಾಹಿತ್ಯ: ಕಣಗಾಲ್ ಪ್ರಭಾಕರಶಾಸ್ತ್ರಿ
ಸಂಗೀತ: ವಿಜಯಭಾಸ್ಕರ್
ಗಾಯನ: ಪಿ.ಬಿ.ಶ್ರೀನಿವಾಸ್, ವಾಣಿ ಜಯರಾಮ್

ಶುಭಮಂಗಳ
ಸುಮುಹೂರ್ತವೆ
ಶುಭವೇಳೇ.. 
ಅಭಿಲಾಷೆಯ 
ಅನುಬಂಧವೆ
ಕರೆಯೋಲೆ

ಶುಭಮಂಗಳ
ಸುಮುಹೂರ್ತವೆ
ಶುಭವೇಳೇ.. 
ಶುಭಮಂಗಳಾ..

ಚೈತ್ರವಸಂತವೆ ಮಂಟಪ ಶಾಲೆ

ತಾರಾ ಲೋಕವೆ ದೀಪಮಾಲೆ |೨|

ಸದಾನುರಾಗವೆ ಸಂಭಂಧ ಮಾಲೆ |೨|
ಬದುಕೇ ಭೋಗದ ರಸ ರಾಸಲೀಲೆ!
ರಸ ರಾಸಲೀಲೆ

ಶುಭಮಂಗಳ

ಸುಮುಹೂರ್ತವೆ
ಶುಭವೇ ಏ ಏ ಏ ಳೇ.. 
ಶುಭಮಂಗಳಾ..

ಭಾವತರಂಗವೆ ಸಪ್ತಪದಿ ನಾಗೋಲೆ
ಭಾವೈಕ್ಯ ಗಾನವೆ ಉರುಟಣೆ ಉಯ್ಯಾಲೆ |೨|

ಭಾವೊನ್ಮಾದವೆ ಶೃಂಗಾರ ಲೀಲೆ |೨|
ಬದುಕೇ ಭಾವದ ನವರಾಗ ಮಾಲೆ!
ನವರಾಗ ಮಾಲೆ

ಶುಭಮಂಗಳ
ಸುಮುಹೂರ್ತವೆ
ಶುಭವೇಳೇ.. 

ಶುಭಮಂಗಳಾ..

ಈ ಜೀವನವೆ ನವರಂಗ ಶಾಲೆ
ಯವ್ವನ ಕಾಲವೆ ಆನಂದ ಲೀಲೆ |೨|

ಹೃದಯ ಮಿಲನವೆ ಹರುಷದ ಹಾಲಲೆ |೨|
ಬದುಕೇ ಸುಮದುರ ಸ್ನೇಹ ಸಂಕೋಲೆ

ಸ್ನೇಹ ಸಂಕೋಲೆ!

ಶುಭಮಂಗಳ
ಸುಮುಹೂರ್ತವೆ
ಶುಭವೇಳೇ.. 
ಅಭಿಲಾಷೆಯ 
ಅನುಬಂಧವೆ

ಕರೆಯೋಲೆ
ಶುಭಮಂಗಳಾ!

Category: ಕನ್ನಡ ಚಿತ್ರಸಾಹಿತ್ಯ
Category: ಶುಭಮಂಗಳ ಚಿತ್ರ
Category: ಕಣಗಾಲ್ ಪ್ರಭಾಕರಶಾಸ್ತ್ರಿ ಸಾಹಿತ್ಯ
Category:Kannada